Felicitation
ಚರ್ಚ್ ಧರ್ಮಗುರುಗಳಿಗೆ ಅಭಿನಂದನಾ ಕಾರ್ಯಕ್ರಮ
ಸುಳ್ಯ ದಿ: 04-08-2024 ಭಾನುವಾರದಂದು ಸುಳ್ಯ ಸಂತ ಬ್ರಿಜಿದ್ ಚರ್ಚ್ ನಲ್ಲಿ ಬಲಿಪೂಜೆ ಹಾಗೂ ಆರಾಧನೆಯ ನಂತರ ಸುಳ್ಯ ಚರ್ಚ್ ಧರ್ಮಗುರುಗಳಾದ ವಂದನೀಯ ವಿಕ್ಟರ್ ಡಿ’ ಸೋಜಾ ಇವರನ್ನು ಸಂತ ಲಾರೆನ್ಸ್ ವಾಳೆಯ ಗುರಿಕಾರರು ಹಾಗು ಕುಟುಂಬದ ವತಿಯಿಂದ ವಾಳೆಯ ಹಬ್ಬ ಹಾಗೂ ಪೋಷಕ ಸಂತ, ಸಂತ ಜೋನ್ ವಿಯೆನ್ನಿ ಅವರದ ದಿನಾಚರಣೆಯ ಪ್ರಯುಕ್ತ ಸಂತ ಬ್ರಿಜಿದ್ ಚರ್ಚ್ ಪಾಲನ ಪರಿಷದ್ ಉಪಾಧ್ಯಕ್ಷರಾದ ಶ್ರೀ ನವೀನ್ ಮಚಾದೊ, ಹಾಗೂ ಪಾಲನ ಪರಿಷದ್ ಕಾರ್ಯಾದರ್ಶಿ ಶ್ರೀಮತಿ ಜೂಲಿಯಾ ಕ್ರಾಸ್ತ ಇವರು ಹೂಗುಚ್ಚ ನೀಡಿ ಅಭಿನಂದಿಸಿ ಶುಭಕೋರಿದರು