ಸಂತ ಲಾರೆನ್ಸ್ ಸಮುದಾಯದ ಪಾಲಕ ಸಂತರ ಹಬ್ಬ
ಸುಳ್ಯ: ಆ. 4 ಭಾನುವಾರದಂದು ಆಯರ್ಲೇಂಡಿನ ಸಂತ ಬ್ರಿಜಿದ್ ಚರ್ಚ್ ಸಮುದಾಯ ಸಂತ ಲಾರೆನ್ಸ್ ಸಮುದಾಯದ ಪಾಲಕ ಸಂತರ ಹಬ್ಬವನ್ನು ಆಚರಿಸಲಾಯಿತು. ಬಲಿಪೂಜೆಯನ್ನು ಚರ್ಚ್ ಗುರುಗಳಾದ ವಂದನೀಯ ವಿಕ್ಟರ್ ಡಿ’ಸೋಜಾರವರು ಅರ್ಪಿಸಿದರು. ಸಮುದಾಯದ ಎಲ್ಲಾ ಕುಟುಂಬದ ಸದಸ್ಯರು ಪೋಷಕ ಸಂತರಿಗೆ ಹೂವನ್ನು ಸಮರ್ಪಿಸಿ ಗೌರವ ಸಲ್ಲಿಸಿದರು. ಬಲಿಪೂಜೆಯ ನಂತರ ಎಲ್ಲಾ ಭಕ್ತಾಧಿಗಳಿಗೆ ಲಘು ಉಪಹಾರವನ್ನು ಸಂತ ಲಾರೆನ್ಸ್ ಸಮುದಾಯದವರು ಏರ್ಪಡಿಸಿದ್ದರು.