ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನ ವಿತರಣೆ
ಸುಳ್ಯ ದಿ: 04-08-2024 ಭಾನುವಾರದಂದು ಸುಳ್ಯ ಸಂತ ಬ್ರಿಜಿದ್ ಚರ್ಚ್ ಕುಟುಂಬದ ಬಡ ಪದವಿ ಶಿಕ್ಷಣ ಕಲಿಯುತ್ತಿರು ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ವಿದ್ಯಾರ್ಥಿ ವೇತನವನ್ನು ಚರ್ಚ್ ಗುರುಗಳಾದ ವಂದನೀಯ ವಿಕ್ಟರ್ ಡಿ’ ಸೋಜಾರವರು ತಲಾ ರೂಪಾಯಿ 5,000/- ದಂತೆ ವಿತರಿಸಿದರು. ವಿದ್ಯಾರ್ಥಿ ವೇತನದ ಸಹಾಯವನ್ನು ಪಡೆದ ವಿದ್ಯಾರ್ಥಿಗಳು. ಆಂಡ್ರ್ಯೂ ವಿನ್ ಸ್ಟನ್ ಡಿ’ ಸೋಜಾ, ಬಿ.ಸಿ.ಎ. ಪ್ರಥಮ ವರ್ಷ, ತನುಷಾ ಥೋಮಸ್ ಪದವಿ ಪ್ರಥಮ ವರ್ಷ, ಐಶ್ವರ್ಯ ಬಿ.ಎಸ್ಸಿ. ದ್ವಿತೀಯ ವರ್ಷ, ಅಮರ್ ಲಾಲ್ ಎಸ್. ಜೆ. ಬಿ.ಬಿ.ಎ. ದ್ವಿತೀಯ ವರ್ಷ, ಜೈಸನ್ ಡಿ’ಸೋಜಾ ಎಂಜಿನೀಯರಿಂಗ್ ದ್ವಿತೀಯ ವರ್ಷ, ಎಮ್. ಎಸ್. ದೀಕ್ಷಾ ಎಂ.ಎಸ್ಸಿ, ನಿಶಾ ಥೋಮಸ್ ಎಂ.ಸಿ.ಎ., ದೀಕ್ಷಿತ್ ಎಂ. ಎಸ್, ಡಿಪ್ಲೊಮಾ. ಈ ಸಂದರ್ಬದಲ್ಲಿ ಶ್ರೀ. ನವೀನ್ ಮಚಾದೊ ಉಪಾಧ್ಯಕ್ಷರು ಪಾಲನ ಸಮಿತಿ, ಶ್ರೀಮತಿ ಜೂಲಿಯಾ ಕ್ರಾಸ್ತಾ ಕಾರ್ಯದರ್ಶಿ ಪಾಲನ ಸಮಿತಿ ಹಾಗೂ ಎಲ್ಲಾ ಚರ್ಚ್ ಬಾಂಧವರು ಉಪಸ್ಥಿತರಿದ್ದರು.