NEWS

Felicitation to senior couples

Seniors Day attendies

ಕಥೋಲಿಕ್ ಸಭಾ ಸುಳ್ಯ ಘಟಕ ಹಾಗೂ ಚರ್ಚ್ ಪಾಲನಾ ಪರಿಷದ್ ವತಿಯಿಂದ ಹಿರಿಯರ ದಿನಾಚರಣೆ

ಥೋಲಿಕ್ ಸಭಾ ಸುಳ್ಯ ಘಟಕ ಹಾಗೂ ಚರ್ಚ್ ಪಾಲನಾ ಪರಿಷದ್ ಸಂತ ಬ್ರಿಜಿಡ್ಸ್ ಚರ್ಚ್ ಸುಳ್ಯ ಇದರ ವತಿಯಿಂದ ದಿನಾಂಕ 11-08-2024ನೇ ಭಾನುವಾರದಂದು ಹಿರಿಯರ ದಿನಾಚರಣೆಯನ್ನು ವಿಜ್ರಂಭಣೆಯಿಂದ ಚರಿಸಲಾಯಿತು. ಕಲ್ಲುಗುಂಡಿ ಧರ್ಮಕೇಂದ್ರದ ಧರ್ಮಗುರುಗಳಾದ ವಂದನೀಯ ಪೌಲ್ ಕ್ರಾಸ್ತಾ ಇವರು ಹಿರಿಯರಿಗಾಗಿ ವಿಶೇಷ ಬಲಿಪೂಜೆಯನ್ನು ಅರ್ಪಿಸಿದರು. ನಂತರ ಎಲ್ಲರಿಗೂ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಸಭಾ ಕಾಯ್ಕ್ರಮದಲ್ಲಿ ಕಥೋಲಿಕ್ ಸಭಾ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಪ್ರೇಮ್ ಪ್ರಕಾಶ್ ಡಿ’ಸೋಜಾ, ಕಥೋಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಸುಳ್ಯ ಧರ್ಮಕೇಂದ್ರದ ಧರ್ಮಗುರುಗಳಾದ ವಂ| ವಿಕ್ಟರ್ ಡಿ’ ಸೋಜಾ, ಕಲ್ಲುಗುಂಡಿ ಧರ್ಮಕೇಂದ್ರದ ಧರ್ಮಗುರುಗಳಾದ ವಂ| ಪೌಲ್ ಕ್ರಾಸ್ತಾ, ಕಥೋಲಿಕ್ ಸಭಾ ಪುತ್ತೂರು ವಲಯದ ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀ. ಮೆಲ್ವಿನ್ ಡಿ’ ಸೋಜಾ, ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷರಾದ ಶ್ರೀ ನವೀನ್ ಮಚಾದೊ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶ್ರೀ ಡೇವಿಡ್ ಧೀರಾ ಕ್ರಾಸ್ತಾ, ಸಂತ ಬ್ರಿಜಿಡ್ಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ| ಅಂತೋನಿ ಮೇರಿ, ಅಸ್ಸಿಸಿ ಸದನ ಕಾನ್ವೆಂಟಿನ ಸುಪೀರಿಯರ್ ಸಿ| ಸಿಸಿಲಿ ಸೆಬಾಸ್ಟಿಯನ್, ಸಿ| ಗ್ರೇಸ್, ಬ್ರ| ಪ್ರವೀಣ್ ಫ್ರಾನ್ಸಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಥೋಲಿಕ್ ಸಭಾ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಪ್ರೇಮ್ ಪ್ರಕಾಶ್ ಡಿ’ ಸೋಜಾ ರವರು ಎಲ್ಲರನ್ನು ಸ್ವಾಗತಿಸಿದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಹಿರಿಯ ಸಿ| ಗ್ರೇಸ್ ಉದ್ಘಾಟಿಸಿದರು. ಹಿರಿಯರಿಗೆ ಗೇಮ್ಸ್ ಹಾಗೂ ಕ್ವಿಜ್ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀ. ಅರುಳಪ್ಪನ್ ಟಿ. ನಿವ್ರತ್ತ ಶಿಕ್ಷಕರು ಹಾಗೂ ಮಾಜಿ ಪಾಲನ ಪರಿಷದ್ ಉಪಾಧ್ಯಕ್ಷರು ತಮ್ಮ ಬಾಲ್ಯದ ನೆನಪುಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು.  ಈ ಸಂದರ್ಭದಲ್ಲಿ ಶ್ರೀ ಕ್ಷೇವಿಯರ್ ಡಿ’ ಸೋಜಾ ಕಥೋಲಿಕ್ ಸಭಾ ಪುತ್ತೂರು ವಲಯದ ರಾಜಕೀಯ ಸಂಚಾಲಕರು ಹಾಗೂ ಸರಕಾರಿ ಮಹಿಳಾ ಕಾಲೇಜಿನ ನಿವ್ರತ್ತ ಪ್ರಾಂಶುಪಾಲರು, ರೋಟರಿ ಕ್ಲಭ್ ಸಕ್ರೀಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಎಲ್ಲಾ ಹಿರಿಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪ್ರಸ್ತುತ ವರ್ಷದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ, ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಧರ್ಮಕೇಂದ್ರದ ಎಂಟು ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು.  ಕಥೋಲಿಕ್ ಸಭಾ ಸುಳ್ಯ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗೋಡ್ ಫ್ರೀ ಮೊಂತೇರೊ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಜೂಲಿಯಾ ಕ್ರಾಸ್ತಾ ಹಾಗು ಶ್ರೀ ಸಂತೋಷ್ ಕ್ರಾಸ್ತಾ ನಿರೂಪಿದರು.

Photo Gallery:  Gallery 

Video Gallery: youtube.com/@dreamssullia?si=L2qKXczGA3BM-8-k