ಸಂತ ಬ್ರಿಜಿದ್ ಚರ್ಚ್ ಮೊಂತಿ ಹಬ್ಬ ಆಚರಣೆ ಸಪ್ಟೆಂಬರ್ 8 2024
ಸಂತ ಬ್ರಿಜಿದ್ ಚರ್ಚ್ ಮೊಂತಿ ಹಬ್ಬ ಆಚರಣೆ ಸಪ್ಟೆಂಬರ್ 8 2024
ಪವಿತ್ರ ಬಲಿಪೂಜೆ : ವಂ. ಜೋನ್ ಪಿಂಟೊ ಸಹ ಗುರುಗಳಾದ ವಂ. ಓಝ್ವಾಲ್ಡ್ ಲಸ್ರಾದೊ ಹಾಗೂ ವಂ. ವಿಕ್ಟರ್ ಡಿ ಸೋಜಾ
ಬಲಿಪೂಜೆಯ ನೇರ ಪ್ರಸಾರ ಡ್ರೀಮ್ಸ್ ಯೂಟ್ಯೂಬ್ ಚಾನೆಲ್
ಶ್ರೀ. ಆಲ್ವೀನ್ ಡಿ ಸೋಜಾ, ಶ್ರೀ ಅವಿನಾಶ್ ಶ್ರೀ ವಿವಿನ್ ಜೀವನ್ ಮೊಂತೇರೊ
ಸಂತ ಬ್ರಿಜಿದ್ ಚರ್ಚ್ ಕುಟುಂಬಗಳಲ್ಲಿ ಮೊಂತಿ ಫೆಸ್ತ್
ಸುಳ್ಯ ಸೆ. 8: ಸುಳ್ಯದಲ್ಲಿ ಕನ್ಯಾಮರಿಯಮ್ಮನವರ ಜನುಮ ದಿನವಾದ ಮೊಂತಿ ಫೆಸ್ತ್ ಚರ್ಚ್ ಕುಟುಂಬದವರು ರವಿವಾರ ಸಂಭ್ರಮದಿಂದ ಆಚರಿಸಿದರು.
ಧರ್ಮಗುರುಗಳು ಗ್ರೊಟ್ಟೊದ ಮುಂದೆ ಹೊಲಗಳಿಂದ ಆರಿಸಿ ತಂದ ಹೊಸ ತೆನೆಯನ್ನು ಆಶೀರ್ವಾದಿಸಿದರು. ಮಕ್ಕಳು ಹಾಗೂ ಹಿರಿಯರು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂವುಗಳನ್ನು ಅರ್ಪಿಸಿದರು. ಬಳಿಕ ಆಶೀರ್ವದಿಸಿದ ಭತ್ತದ ತೆನೆಯನ್ನು ಹಾಗೂ ಕನ್ಯಾ ಮಾತೆಯ ಮೂರ್ತಿಯನ್ನು ತೊಟ್ಟಿಲಿನಲ್ಲಿ ಸ್ತ್ರೀ ಸಂಘಟನೆಯ ಸದಸ್ಯರು ಹಾಗೂ ವಾಳೆಯ ಗುರುಕಾರರು ಮೆರವಣಿಗೆಯ ಮೂಲಕ ಚರ್ಚ್ ಒಳಗೆ ಕೊಂಡೊಯ್ದರು. ಹಾಗೂ ಚರ್ಚ್ ಕುಟುಂಬದ ಎಲ್ಲಾ ಸದಸ್ಯರು ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಬಲಿಪೂಜೆಯನ್ನು ಅತಿಥಿ ಗುರುಗಳಾದ ವಂ. ಜೋನ್ ಪಿಂಟೊ ಸಹ ಗುರುಗಳಾದ ವಂ. ಓಝ್ವಾಲ್ಡ್ ಲಸ್ರಾದೊ ಹಾಗೂ ವಂ. ವಿಕ್ಟರ್ ಡಿ ಸೋಜಾ ಇವರೊಂದಿಗೆ ಅರ್ಪಿಸಿದರು. ವಂ. ಜೋನ್ ಪಿಂಟೊರವರು ತಮ್ಮ ಪ್ರವಚನದಲ್ಲಿ ಕುಟುಂಬ ಜೀವನ ಹಾಗೂ ಮಾತೆ ಮರಿಯಳು ಕುರಿತು ಹೇಳಿದರು.
ಬಲಿಪೂಜೆಯ ಬಳಿಕ ಎಲ್ಲಾ ಕುಟುಂಬದ ಸದಸ್ಯರಿಗೆ ಆಶೀರ್ವಾದಿಸಿದ ಹೊಸ ತೆನೆಯನ್ನು ವಿತರಿಸಿದರು. ಮಕ್ಕಳಿಗೆ ಹಿರಿಯರಿಗೆ ಸ್ತ್ರೀ ಸಂಘಟನೆ ಇವರ ಪ್ರಾಯೋಜಕತ್ವದಲ್ಲಿ ಮಾಲ್ಟ್, ಪ್ರೀಮಾ ಮತ್ತು ಗೋಡ್ ಫ್ರೀ ಗೊನ್ಸಾಲ್ವೀಸ್ ಸಂತ ಬ್ರಿಜದ್ ವಾಳೆ ಸುಳ್ಯ, ಜಾನ್ ಫ್ಲೋರಾ ಡಿ ಸೋಜಾ ನಿತ್ಯಾಧರ್ ವಾಳೆ, ಬ್ರಿಜಿಟ್ ಆಂಟೋನಿ ಕ್ರಾಸ್ತಾ ಸಂತ ಆಂತೋನಿ ಮೊದಳನೇ ವಾಳೆ ಇವರ ಪ್ರಾಯೋಜಕತ್ವದಲ್ಲಿ ವೆಜ್ ಪಪ್ಸ್, ಅಶೋಕ್ ಕಂದಡ್ಡಕ ಸಂತ ಜೋಸೆಫ್ ವಾಳೆ ರೋಯಲ್ ಪ್ಯಾಶನ್ ವಸ್ತ್ರ ಮಳಿಗೆ ಸುಳ್ಯ ದರ ಮಾಲಿಕರು ಇವರು ಐಸ್ಕ್ರೀಂ ನೀಡಿದರು
ಹೊಸತೆನೆಯನ್ನು ಶ್ರೀ. ಕೆ.ಪಿ. ರೋಬರ್ಟ್ ಇವರು ತಂದು ಕೊಟ್ಟು ಸಹಕರಿಸಿದರು. ಪ್ರತೀ ಕುಟುಂಬಗಳಿಗೆ ಕಬ್ಬು ವಿತರಿಸಲಾಯಿತು, ಕಬ್ಬನ್ನು ರೋಯ್ಟರ್ ಡಿ ಸೋಜಾ ಮತ್ತು ಗ್ರಾಶಿಯಾ ಸಂತ ಬ್ರಿಜಿದ್ ವಾಳೆ ಇವರ ಪ್ರಾಯಜಕತ್ವದಲ್ಲಿ ಶ್ರೀ ಪ್ರೇಮ್ ಪ್ರಕಾಶ್ ಡಿ’ ಸೋಜಾ ಚಿಕ್ಕಿನಡ್ಕ ಇವರು ಸಾಗಟ ವೆಚ್ಚವನ್ನು ಭರಿಸಿ ತಂದುಕೊಟ್ಟರು.
ಇನ್ನು ಉಳಿದಂತೆ ಗ್ರೊಟ್ಟೊಗೆ ಹೂದಾನವನ್ನು ಶ್ರೀಮತಿ ಜೂಲಿಯಟ್ ಡಿ ಸೋಜಾ ಸಂತ ಬ್ರಿಜಿದ್ ವಾಳೆ, ಚರ್ಚ್ ವೇದಿಕೆಗೆ ಹೂ ದಾನ ಶ್ರೀ. ರಕ್ಷಿತ್ ಲಾರೆನ್ಸ್ ಮಾಡ್ತಾ ಬಾಲಯೇಸು ವಾಲೆ ಹಾಗು ಶ್ರೀ. ತೋಮಸ್ ಡಿ ಸೋಜಾ ನಿತ್ಯಾಧರ್ ವಾಳೆ ಸುಳ್ಯ ಹಾಗೂ ಬಾಲ ಮರಿಯಳ ತೊಟ್ಟಿಲಿಗೆ ಹೂ ದಾನ ತೆರೇಜಾ ಮೊಂತೇರೊ ಮತ್ತು ಕುಟುಂಬ ಸಂತ ಆಂತೋನಿ ಮೊದಳನೇ ವಾಳೆ ಇವರು ನೀಡಿ ಸಹಕರಿಸಿದರು.
ಹಬ್ಬಕ್ಕೆ ಮುಂಚಿತವಾಗಿ 9 ದಿನಗಳ ವಿಷೇಶ ಪ್ರಾರ್ಥನೆಯಲ್ಲಿ ಮಾತೆ ಮರಿಯಳ ಆಶೀರ್ವಾದಗಳನ್ನು ಬೇಡಿಕೊಂಡು ಮೊಂತಿ ಹಬ್ಬದ ತಯಾರಿ ನಡೆಸಲಾಗುತ್ತದೆ. ಈ ದಿನಗಳಲ್ಲಿ ಹೂವುಗಳನ್ನು ತರುವ ಮಕ್ಕಳಿಗೆ ಹಾಗೂ ಎಲ್ಲರಿಗೂ ಸಿಹಿತಿಂಡಿಗಳನ್ನ ಪ್ರಾಯಜಕತ್ವದಲ್ಲಿ ವಿತರಿಸಲಾಗುತ್ತದೆ.
ಧರ್ಮಗುರುಗಳು ಗ್ರೊಟ್ಟೊದ ಮುಂದೆ ಹೊಲಗಳಿಂದ ಆರಿಸಿ ತಂದ ಹೊಸ ತೆನೆಯನ್ನು ಆಶೀರ್ವಾದಿಸಿದರು
ಧರ್ಮಗುರುಗಳು ಗ್ರೊಟ್ಟೊದ ಮುಂದೆ ಹೊಲಗಳಿಂದ ಆರಿಸಿ ತಂದ ಹೊಸ ತೆನೆಯನ್ನು ಆಶೀರ್ವಾದಿಸಿದರು